ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾವೇರಿ ಜಿಲ್ಲೆ

ಶಾಲಾ ಶಿಕ್ಷಣ ಇಲಾಖೆ

wrappixel kit

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾವೇರಿ ಜಿಲ್ಲೆ

ಪ್ರಾಥಮಿಕ ಶಿಕ್ಷಕರ ತರಬೇತಿ ಕೇಂದ್ರಗಳಿದ್ದ ಧಾರವಾಡ ಮತ್ತು ಮೈಸೂರುಗಳಲ್ಲಿ ಡಯಟ್ ಪ್ರಾರಂಭವಾದವು. 1994ರ ವೇಳೆಗೆ ರಾಜ್ಯದಲ್ಲಿ 20 ಡಯಟ್ ಗಳು ಪ್ರಾರಂಭವಾಗುವುದರೊಂದಿಗೆ ಜಿಲ್ಲಾ ಹಂತದಲ್ಲಿ ಸೇವಾ ಪೂರ್ವ ಹಾಗೂ ಸೇವಾನಿರತ ಶಿಕ್ಷಕರ ತರಬೇತಿಗಾಗಿ ಸಂಪನ್ಮೂಲ ಕೇಂದ್ರಗಳ ಚಾಲನೆಯಾಯಿತು. ಇತ್ತೀಚೆಗೆ ಹೊಸದಾಗಿ ರಚನೆಯಾದ ಎಲ್ಲಾ ಜಿಲ್ಲೆಗಳಲ್ಲೂ ಡಯಟ್‌ಗಳು ಪ್ರಾರಂಭವಾಗಿವೆ.

ಡಯಟ್ ಒಂದು ಪರಿಚಯ

       2005 ರಲ್ಲಿ  15-06-2005 ರಿಂದ ಕಾರ್ಯಾರಂಭವಾದ ಹಾವೇರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಇಂದು ಕರ್ನಾಟಕದಲ್ಲೇ ಒಂದು ಹೆಸರು ಪಡೆದ ಸಂಸ್ಥೆಯಾಗಿದೆ. ಈ ಡಯಟ್ಟಿನಲ್ಲಿ ಈ ವರೆಗೆ 11 ಪ್ರಾಂಶುಪಾಲರು ಕಾರ್ಯ ನಿರ್ವಹಿಸಿದ್ದಾರೆ. ಪ್ರತಿಯೊಬ್ಬರ  ಅವಧಿಯಲ್ಲೂಪ್ರಗತಿ ಸಾಧಿಸುತ್ತಾ ಇಂದು ಅತ್ಯುನ್ನತ ಮಟ್ಟಕ್ಕೆ ತಲುಪಿದೆ. ಈ ಡಯಟ್ಟಿನಲ್ಲಿ ಎಲ್ಲಾ ಮೂಲ ಸೌಲಭ್ಯಗಳಿದ್ದು, ಇರುವ ಎಲ್ಲಾ ಹಿರಿಯ ಉಪನ್ಯಾಸಕರು, ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಲಿಪಿಕ ನೌಕರರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

       ಸದರಿ ಡಯಟ್ಟಿನಲ್ಲಿ ಒಟ್ಟು 31 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 15ಪುರುಷರೂ ಮತ್ತು 10 ಮಹಿಳೆಯರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1 ಉಪನ್ಯಾಸಕರ ಹುದ್ದೆ, , 1 ಅಂಕಿ ಅಂಶ ಸಹಾಯಕ ಹುದ್ದೆ ಖಾಲಿ ಇವೆ. ಕೆಲಸ ನಿರ್ವಹಿಸುತ್ತಿರುವ 16 ಅಧಿಕಾರಿ ಮತ್ತು ಸಿಬ್ಬಂದಿಯವರಲ್ಲಿ ಒಬ್ಬರು ಪ್ರಾಂಶುಪಾಲರು, 6 ಜನ ಹಿರಿಯ ಉಪನ್ಯಾಸಕರು, 08 ಜನ ಉಪನ್ಯಾಸಕರು, 15 ಜನ ಲಿಪಿಕ ನೌಕರರು, ಒಬ್ಬರು ಡ್ರೈವರ್, 4 ಜನ ‘ಡಿ’ ದರ್ಜೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

       ಡಯಟ್ಟಿನಲ್ಲಿ ಮೂರು ಕಟ್ಟಡಗಳಿದ್ದು, ಎಲ್ಲಾ ಸುವ್ಯವಸ್ಥೆಯನ್ನು ಹೊಂದಿದೆ. ಪ್ರಧಾನ ಕಟ್ಟಡದಲ್ಲಿ ಪ್ರತ್ಯೇಕವಾಗಿ ಪ್ರಾಂಶುಪಾಲರ, ಉಪ ಪ್ರಾಂಶುಪಾಲರ, ಹಿರಿಯ ಉಪನ್ಯಾಸಕರು ಮತ್ತು ಉಪನ್ಯಾಸಕರ ಹಾಗೂ ಲಿಪಿಕ ನೌಕರರ ಕೊಠಡಿಗಳಿವೆ. ಇದಲ್ಲದೆ ಎರಡು ಕಂಪ್ಯೂಟರ್ ಕೊಠಡಿ, , ನಲಿ ಕಲಿ ಕೊಠಡಿ, ಮತ್ತು ವಿಡಿಯೋ ಕಾನ್ಫರೆನ್ಸ್ ಹಾಲ್ ಇದೆ. ತರಬೇತಿ ನೀಡಲು ಅನುಕೂಲವಾಗುವಂತೆ ಎರಡು ಕೊಠಡಿಗಳಿಗೆ ಪ್ರೊಜೆಕ್ಟರ್ ಅಳವಡಿಸಿದೆ ಹಾಗೂ ಟೆಲಿ ಕಾನ್ಫರೆನ್ಸ್. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಒಟ್ಟಿನಲ್ಲಿ ಎಲ್ಲಾ ಮೂಲ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವಾಗಿದೆ.

 

ಮತ್ತಷ್ಟು ಓದಿ

Notifications ೨

tets (2021-12-22 15:43:55)

test (2021-12-22 15:43:55)

notification1 (2021-12-22 15:43:55)

ಕಾಯ೵ಕ್ರಮಗಳು

×
ABOUT DULT ORGANISATIONAL STRUCTURE PROJECTS